ಹಿಂದುತ್ವ ಇದ್ದರೆ ಮಾತ್ರ ಬಿಜೆಪಿಗೆ ಭವಿಷ್ಯ ಎಂದು ಶಾಸಕ ಬಸವನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ. ಬುದವಾರ ಸಂಜೆ 6 ಗಂಟೆಗೆ ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ ದರ್ಶನ ಪಡೆದ ಯತ್ನಾಳ್ ಅವರು ಮಾತನಾಡಿದ್ದು ಆರ್ ಸಿ ಬಿ ಗಲಾಟೆ ಅದು ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಗೃಹ ಸಚಿವರ ತಪ್ಪಿನಿಂದ ಆಗಿದೆ. ಬೆಂಗಳೂರಿನಲ್ಲಿ ಹತ್ತು ಜನರ ಸಾವಾಗಿದ್ದರೆ ಡಿ ಕೆ ಶಿವಕುಮಾರ್ ಕಪ್ ಗೆ ಚುಂಬನ ಕೊಡುತ್ತಿದ್ದರು. ಆರ್ ಸಿ ಬಿ ಅಪರಾಧಿಗಳು ನಂಬರ್ 1 ಸಿದ್ದರಾಮಯ್ಯ, ನಂಬರ್ 2 ಡಿ ಕೆ ಶಿವಕುಮಾರ್, ನಂಬರ್ 3 ಗೃಹ ಸಚಿವರು. ತಮ್ಮ ಸ್ವಾರ್ಥಕ್ಕಾಗಿ ಇವರು ಜನರನ್ನ ಬಲಿ ತೆಗೆದುಕೊಂಡಿದ್ದಾರೆ ಎಂದು ಯತ್ನಾಳ್ ಕಿಡಿ ಕಾರಿದ್ದಾರೆ