ದಂತಚೋರ ವೀರಪ್ಪನ್ ಊರಾದ ಹನೂರು ತಾಲೂಕಿನ ಗೋಪಿನಾಥಂನಲ್ಲಿ ದೇವರಂತೆ ಭಕ್ತಿ- ಶ್ರದ್ಧೆ ಇರಿಸಿಕೊಂಡಿರುವ ದಿ. ಪಿ.ಶ್ರೀನಿವಾಸ್ ಅವರ 71 ನೇ ಜನ್ಮದಿನವನ್ನು ಗ್ರಾಮಸ್ಥರು ಆಚರಿಸಿದರು. ಗೋಪಿನಾಥಂ ಗ್ರಾಮದ ಪಿ.ಶ್ರೀನಿವಾಸ್ ಅವರೇ ಕಟ್ಟಿಸಿರುವ ಶ್ರೀ ಶಕ್ತಿ ಮಾರಿಯಮ್ಮನ್ ದೇವಸ್ಥಾನದ ಮುಂಭಾಗ ಗ್ರಾಮಸ್ಥರು ಕೇಕ್ ಕತ್ತರಿಸಿ ಡಿಸಿಎಫ್ ಪಿ.ಶ್ರೀನಿವಾಸ್ ಅವರನ್ನು ನೆನೆದರು. ಡಿಆರ್‌ಎಫ್‌ಒ ರಾಜಶೇಖರ್ ಮೂರ್ತಿ, ಗ್ರಾಮದ ಮುಖಂಡರಾದ ಜಿ.ಪಿ.ಎನ್. ಪ್ರಭು, ಮಹಾಲಿಂಗಂ, ದೇವಸ್ಥಾನದ ಪೂಜಾರಿ ರಾಜ, ಗ್ರೀನ್ ವಾರಿಯರ್ಸ್ ತಂಡದ ರಾಮ, ಲಕ್ಷ್ಮಣ್ , ಬಾಲರಾಜ್ ಇದ್ದರು. ಪಿ.ಶ್ರೀನಿವಾಸ್ ಅವರು ಗಾಂಧಿ ತತ್ವದಡಿ ನಂಬಿಕೆ ಇಟ್ಟು ವೀರಪ್ಪನ್ ನನ್ನು ಶರಣಾಗಿಸುತ್ತೇನೆಂದು ಪ್ರಯತ್ನ ಪಟ್ಟು ಬಲಿಯಾಗಿದ್ದರು