ನಗರದ ಮುಖ್ಯ ರಸ್ತೆಗಳಲ್ಲಿ ಪಾಲಿಕೆಯಿಂದ 150 ವೋಲ್ಟೇಜ್‌ನ 605 ಎಲ್ಇಡಿ ಲೈಟ್ ಗಳಿಗೆ ಸುಮಾರು 80-90 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಹೇಳಿದರು. ನಗರಸಭೆಯ ಹಳೆಯ ಕಚೇರಿಯಲ್ಲಿ ಸಚಿವರು ಹಾಗೂ ರಾಯಚೂರು ಮಹಾನಗರ ಪಾಲಿಕೆ ಮಹಾ ಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ಜಂಟಿಯಾಗಿ ಎಲ್ ಇಡಿ ಲೈಟಿಂಗ್ ಗಳಿಗೆ ಬುಧವಾರ ಚಾಲನೆ ನೀಡಿದರು. ಇದಕ್ಕಾಗಿ ಒಂದು ಸಮಿತಿ ರಚಿಸಿ ಉತ್ತಮ ನಿರ್ವಹಣೆಗೆ ಜವಾಬ್ದಾರಿ ನೀಡಬೇಕು ಎಂದು ಸಚಿವರು ತಿಳಿಸಿದರು.