ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಮೊಳ್ಳಯ್ಯನಹುಂಡಿ- ಕಂದೇಗಾಲ ರಸ್ತೆಯ ಮಾರ್ಗದಲ್ಲಿ ನಡೆದಿದ್ದು ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಕೊಡಸೋಗೆ ಗ್ರಾಮದ ಕಿರಣ್ ಕುಮಾರ್ (36)ಮೃತ ವ್ಯಕ್ತಿ. ಈತನ ಶವ ಕೊಳೆತ ಸ್ಥಿತಿಯಲ್ಲಿ ಮೊಳ್ಳಯ್ಯನಹುಂಡಿ-ಕಂದೇಗಾಲ ರಸ್ತೆಯ ಜಮೀನೊಂದಕ್ಕೆ ಹೊಂದಿಕೊಂಡಂತಿರುವ ಹಳ್ಳದಲ್ಲಿ ಪತ್ತೆಯಾಗಿದೆ. ಇತನ ಬೈಕ್ ಸುಮಾರು ಇನ್ನೂರು ಮೀಟರ್ ದೂರದಲ್ಲಿ ಬಿದ್ದಿದೆ. ಕೊಲೆ ಶಂಕೆ ವ್ಯಕ್ತವಾಗುತ್ತಿದೆ. ಹಳ್ಳದಲ್ಲಿ ಶವ ಹಾಗೂ ಬೈಕ್ ಬಿದ್ದಿರುವ ಮಾಹಿತಿ ದೊರೆತ ಗುಂಡ್ಲುಪೇಟೆ ಠಾಣಾ ಪೊಲೀಸರು ತೆರಳಿ ಪರಿಶೀಲಿಸಿ ಮೃತ ದೇಹವನ್ನು ಆಂಬ್ಯೂಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.