ಜಿಲ್ಲಾದಿಕಾರಿ ಡಾ: ಕುಮಾರ ಅವರು ಇಂದು ಮೈಶುಗರ್ ಸಕ್ಕರೆ ಕಾರ್ಖಾನೆಗೆ ದಿಢೀರ್ ಭೇಟಿ ನೀಡಿ ಸಕ್ಕರೆ ಯಾಡ್೯ನಲ್ಲಿ ರೈತರಿಗೆ ಕಲ್ಪಿಸಿರುವ ಮೂಲಭೂತ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ರೈತರಿಗೆ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿರುವ ಬಗ್ಗೆ ಖಾತ್ರಿ ಪಡಿಸುಕೊಂಡ ಜಿಲ್ಲಾಧಿಕಾರಿಗಳು ಕ್ಯಾಂಟೀನ್ ತೆರೆಯಲು ಆಸಕ್ತಿ ಹೊಂದಿರುವವರಿಗೆ ಅವಕಾಶ ನೀಡುವಂತೆ ತಿಳಿಸಿದರು. ಕಬ್ಬಿನ ಹಾಲು ವ್ಯರ್ಥವಾಗುತ್ತಿದೆ ಎಂಬ ದೂರುಗಳ ಬಗ್ಗೆ ಪರಿಶೀಲಿಸಿದಾಗ ಪೈಪ್ ಲೈನ್ ದುರಸ್ತಿಯಿಂದ ಹೊರಬರುತ್ತಿದ್ದು, ಅದನ್ನು ಸಂಗ್ರಹಿಸಿ ವ್ಯರ್ಥವಾಗದಂತೆ ಕ್ರಮಕೈಗೊಂಡಿರುವ ಬಗ್ಗೆ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಸ್ಪಷ್ಠಣೆ ನೀಡಿದರು. ಪ್ರತಿ ದಿನ ಕಬ್ಬು ಹರಿಯುವಿಕೆ ಕುರಿತಂತೆ ಸೂಚನಾ ಪಲಕದಲ್ಲಿ ಅನಾವರಣ ಕುರಿತು ಪರಿಶೀಲಿಸಿದರು.