ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಆಜಾದ್ ನಗರ ಬಡಾವಣೆಯಲ್ಲಿ ವಿವಿಧ ಮೂಲ ಸೌಕರ್ಯಗಳನ್ನ ಒದಗಿಸುವಂತೆ ಆಗ್ರಹಿಸಿ ಸ್ಥಳೀಯ ಬಡಾವಣೆ ನಿವಾಸಿಗಳು ನಗರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ಆಝಾದ ನಗರದ ಬಡಾವಣೆಯಲ್ಲಿ ಹದಿನೈದು ದಿನಕ್ಕೊಂದು ಬಾರಿ ನೀರು ಪೂರೈಕರ ಮಾಡ್ತಾರೆ.ನೀರು ಪೂರೈಕೆ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಐದು ದಿನಕ್ಕೆ ಒಮ್ಮೆಯಾದರೂ ನೀರನ್ನು ಪೂರೈಜೆ ಮಾಡುವಂತೆ ಮನವಿ ಮಾಡಿದರು.ಇನ್ನು ಇದೇ ಸಂಧರ್ಭದಲ್ಲಿ ಸ್ಥಳೀಯ ಪ್ರಮುಖರಾದ ಯಾಶಿನ ಭಾಗವಾನ,ರಾಜು ಮಸಳಿ,ಬಸವರಾಜ ಚಾರಮಗೋಳ,ಸುರೇಖಾ ಸುತಾರ,ಇಮತಿಯಾಜ ಅವಟಿ,ಶಬಾನಾ ಮಖಾಂದಾರ,ಶಿರಾಜ್ಜುದ್ಧೀನ ಉಪಸ್ಥಿತರಿದ್ದರು