ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಧನಿಗೆರೆ ಬಳಿ ಆಟೋ ಟ್ರ್ಯಾಕ್ಟರ್ ನಡುವೆ ಅಪಘಾತವಾಗಿದೆ. ಮೂವರು ಗಾಯಗೊಂಡವರು ಧನಿಗೆರೆ ಗ್ರಾಮದವರಾಗಿದ್ದು ಕೊಳ್ಳೇಗಾಲ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಈ ಅಪಘಾತದಲ್ಲಿ ಆಟೋ ನಜ್ಜುಗುಜ್ಜಾಗಿದೆ. ಟ್ರ್ಯಾಕ್ಟರ್ ಅನ್ನು ಜಪ್ತಿ ಮಾಡಿ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.