ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ಶ್ರೀ ಯೋಗಿ ನಾರಾಯಣ ಬಣಜಿಗ ಹಾಗೂ ಬಲಿಜ ಯುವ ಯೋಗ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ಬುಧವಾರ ನೆರವೇರಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಮಣಿಕಂಠನ್, ಕಾರ್ಯದರ್ಶಿ ಮಹೇಶ್ ಮತ್ತು ಸದಸ್ಯ ರಾಜೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭ ಗ್ರಾಮಸ್ಥರು ಮಾತನಾಡಿ, “ಸಂಘದ ಸ್ಥಾಪನೆಯು ಗ್ರಾಮಗಳ ಏಕತೆ, ಸಹಕಾರ ಮತ್ತು ಸಾಂಸ್ಕೃತಿಕ ಉನ್ನತಿಯತ್ತ ದೊಡ್ಡ ಹೆಜ್ಜೆಯಾಗಿದೆ” ಎಂದು ಹೇಳಿದರು. ಇಂತಹ ಸಂಘಗಳು ಯುವಕರಲ್ಲಿ ಸಮಾಜ ಸೇವೆಯ ಮನೋಭಾವನೆ ಬೆಳೆಸಲು ಸಹಾಯಕವಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.