ವಿಷಜಂತು ಕಚ್ಷಿ ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹನುಮಂತಪ್ಪ (52) ಮೃತಪಟ್ಟ ರೈತ. ಎಂದಿನAತೆ ಪ್ರತಿದಿನ ತಮ್ಮ ಜಮೀನಿನಲ್ಲಿ ಜಾನುವಾರುಗಳಿಗೆ ಮೇವು ಕೊಯ್ಯಲು ಸೋಮವಾರ ಬೆಳಗ್ಗೆ ಹೋಗಿದ್ದರು. ಮೇವು ಕೊಯ್ಯುವ ಸಂದರ್ಭದಲ್ಲಿ ವಿಷಜಂತು ಕಚ್ಚಿದೆ. ಆದರೆ ಮೇವು ಕೊಯ್ಯುವುದರಲ್ಲಿ ಮಗ್ನರಾಗಿದ್ದರಿಂದ ವಿಷಜಂತು ಕಚ್ಚಿರುವುದು ಗಮನಕ್ಕೆ ಬಂದಿಲ್ಲ. ಹಾವು ಕಚ್ಚಿದ ವಿಷ ಮೈಯಲ್ಲ ಆವರಿಸಿ ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ. ಅಕ್ಕಪಕ್ಕದ ರೈತರು ಜಮೀನಿನಲ್ಲಿ ಕುಸಿದು ಬಿದ್ದಿರುವುದನ್ನು ಗಮನಿಸಿ ನೋಡಿದಾಗ ರೈತ ಕೊನೆಯುಸಿರೆಳೆದ್ದಾರೆ. ಏನಾಗಿರಬಹುದು ಎಂದು ರೈತರು ನೋಡಿದಾಗ ಕಾಲಿಗೆ ಹಾವು ಕಚ್ಚಿರುವ ಗುರುತು ಕಂಡು ಬಂದಿದೆ ಎಂದು ಹೇಳಲಾಗಿದೆ.