ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ದಾವಣಗೆರೆ ನಗರದ ಪಾಲಿಕೆ ಆವರಣದಲ್ಲಿ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮವನ್ನು ಶನಿವಾರ ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕರುಗಳಾದ ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಮಾಜಿ ಸಚಿವ ಹೆಚ್ ಆಂಜನೇಯ, ಎಹೆಚ್ ಮುನಿಯಪ್ಪ ಸೇರಿದಂತೆ ಸ್ಥಳೀಯ ದಲಿತ ಮುಖಂಡರು ಭಾಗವಹಿಸಿದ್ದರು. ಕರ್ನಾಟಕದಲ್ಲಿ ನಾಗಮೋಹನ್ ದಾಸ್ ಸಮೀಕ್ಷೆ ನಡೆಸಿದಾಗ ಮಾದಿಗರು ಹೆಚ್ಚು ಜನರು ಇದ್ದಾರೆ ಎಂಬ ತಿರ್ಪು ಬಂದ ಮೇಲೆ ನಮಗೆ ಸರ್ಕಾರ 6 ರಷ್ಟು ಮೀಸಲಾತಿ ನೀಡಬೇಕು ಎಂದು ನಾಗಮೋಹನ್ ದಾಸ್ ಸರ್ಕಾರ ಮುಂದೆ ಇಟ್ಟಾಗ ಒಳಮೀಸಲಾತಿ ಜಾರಿಯಾಗಿದ್ದು, ಇದು ಹೆಚ್ಚಾಗಬೇಕೆ ವಿನಹ ಕಡಿಮೆ ಆಗುವ ಆಗಿಲ್ಲ ಮುಖಂಡರು ಒತ್ತಾಯಿಸಿದರು.