ಕರ್ನಾಟಕದಲ್ಲಿ ಡುಪ್ಲಿಕೇಟ್ ಕಾಂಗ್ರೆಸ್ ಇದೆ. ಮದ್ದೂರಿನಲ್ಲಿ ನಡೆದ ಘಟನೆ ಕಾಂಗ್ರೆಸ್ ಪಕ್ಷಕ್ಕೆ ಅಪಮಾನ. ಈ ರೀತಿ ಮದ್ದೂರಿನಲ್ಲಿ ನಡೆದ ವ್ಯವಸ್ಥೆ ಉತ್ತರ ಪ್ರದೇಶದಲ್ಲಿ ನಡೆದಿದ್ದರೆ, ಭದ್ರಾವತಿಯಲ್ಲಿ ನಡೆದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಉತ್ತರ ಪ್ರದೇಶದಲ್ಲಿ ಕೂಗಿದರೆ. ಆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುಂಡಿಟ್ಟು ಕೊಲ್ಲುತ್ತಿದ್ದರು ಎಂದು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಷ್ಟ್ರದ್ರೋಹಿಗಳಿಗೆ ಬೆಂಬಲ ಕೊಡ್ತಿದೆ ಎಂದು ಆರೋಪಿಸಿದರು.