ಮಾಲೂರು ಪಟ್ಟಣದ ಚಿತ್ರಕಲಾ ಶಿಕ್ಷಕ ದಯಾನಂದ್ ಅವರ ಮನೆಯಲ್ಲಿ ಬುಧವಾರ ಆಪರೇಷನ್ ಸಿಂಧೂರ ಗಣೇಶನನ್ನು ಸ್ಥಾಪನೆ ಮಾಡಲಾಗಿದೆ. ಈ ವರ್ಷ ಏಪ್ರಿಲ್ ವೇಳೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಅನ್ನು ನಡೆಸಿತ್ತು. ಇದರ ನೆನಪಿನ ಸಂಕೇತವಾಗಿ ದಯಾನಂದ್ ಆಪರೇಷನ್ ಸಿಂಧೂರ್ ಥೀಮ್‌ನ ಗಣೇಶನನ್ನು ನಿರ್ಮಿಸಿದ್ದಾರೆ. ದಯಾನಂದ್ ಅವರು ಕಳೆದ 15 ವರ್ಷಗಳಿಂದ ಪ್ರತಿ ಬಾರಿಯೂ ಭಿನ್ನ ವಿಭಿನ್ನವಾದ ಥೀಮ್ ನೊಂದಿಗೆ ಗಣಪತಿಯ ವಿಗ್ರಹವನ್ನು ನಿರ್ಮಿಸಿ ಪೂಜಿಸಿಕೊಂಡು ಬಂದಿದ್ದಾರೆ. ಈ ಬಾರಿಯ ಗಣಪ ಇನ್ನಷ್ಟು ವಿಶೇಷವಾಗಿದ್ದು, ಎಲ್ಲರ ಗಮನ ಸೆಳೆದಿದೆ. ಯೋಧನ ರೂಪದಲ್ಲಿರುವ ಗಣೇಶ ನಾಗರಿಕರನ್ನು ರಕ್ಷಣೆ ಮಾಡುವ ರೀತಿಯಲ್ಲಿ ಅವರು ಮೂರ್ತಿಯನ್ನು ನಿರ್ಮಿಸಿದ್ದಾರೆ.