ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಂಚಿಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಮೇಲ್ಛಾವಣಿ ಕುಸಿದಿರುವ ಘಟನೆ ನಡೆದಿದೆ. ಇಂದು ಸರಿದ ಭಾರಿ ಮಳೆಯಿಂದ ಛಾವಣಿ ಕುಸಿದಿದೆ . ಇನ್ನೂ ಚಾವಣಿ ಕುಸಿದ ಹಿನ್ನೆಲೆ ವಿದ್ಯಾರ್ಥಿಗಳು ಕೆಲವೇ ಕೆಲವು ಅಂತರದಿಂದ ಪಾರಾಗಿದ್ದಾರೆ. ಪ್ರತಿ ಭಾರಿಯೂ ಮಳೆ ಬಂದರೆ ಶಾಲಾ ಮಕ್ಕಳು ಕೈಯಲ್ಲಿ ಜೀವ ಹಿಡಿದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಶಾಲಾ ಕಟ್ಟಡವನ್ನು ದುರಸ್ತಿ ಪಡಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.