ಕಲಬುರಗಿ : ಕಲಬುರಗಿ ನಗರದಲ್ಲಿ ಇತ್ತೀಚೆಗೆ ಜೂಜುಅಡ್ಡೆಗಳು ತಲೆ ಎತ್ತುತ್ತಿವೆ.. ಖುಲ್ಲಾ ಜಾಗ, ಹಾಳು ಬಿದ್ದ ಕಟ್ಟಡ ಹಾಗೂ ಸ್ಮಶಾನ ಸೇರಿದಂತೆ ಇನ್ನಿತರ ಕಡೆ ಜೂಜುಅಡ್ಡೆಗಳು ನಡೆಯುತ್ತಿದ್ದು, ಅಕ್ರಮ ಚಟುವಟಿಕೆಗಳನ್ನ ಹತ್ತಿಕ್ಕಲು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗುತ್ತೆಯೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ.. ಸೆ11 ರಂದು ಮಧ್ಯಾನ 12.30 ಕ್ಕೆ ನಗರದಲ್ಲಿ ಮಾತನಾಡಿದ ಅವರು, ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಸಹ ಜರುಗದಂತೆ ಎಲ್ಲಾ ರೀತಿಯ ಕ್ರಮಗಳನ್ನ ಕೈಗೊಳ್ಳಲಾಗುವುದೆಂದು ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ.