ಮಕ್ಕಂದೂರು ಗ್ರಾಮ ಪಂಚಾಯ್ತಿಯ ಮುಕ್ಕೋಡ್ಲು ಗ್ರಾಮದಲ್ಲಿ ಫಸಲು ಭರಿತ ಏಲಕ್ಕಿ ಮತ್ತು ಕಾಫಿ ಗಿಡಗಳ ಮಾರಣ ಹೋಮವೇ ನಡೆದಿದೆ. ಪೈಸಾರಿ ಜಾಗದಲ್ಲಿ ಹಲವು ದಶಕಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕಾಳಚಂಡ ನಾಣಿಯಪ್ಪ ಎಂಬವರ 2 ಎಕರೆ ತೋಟವನ್ನು ಅರಣ್ಯ ಇಲಾಖೆ ನೆಲಸಮ ಮಾಡಿದೆ. ಅರಣ್ಯ ಸಚಿವರ ನಿರ್ದೇಶನವಿಲ್ಲದೆ, ಯಾವುದೇ ನೊಟೀಸ್ ನೀಡದೆ ಏಕಾಏಕಿ ಗಿಡಗಳನ್ನು ಕಡಿದು ನಾಶ ಮಾಡಲಾಗಿದ್ದು, ಸಂಬAಧಪಟ್ಟ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ವಜಾ ಮಾಡಲು ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿ ಒತ್ತಾಯಿಸಿದೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಸುರೇಶ್ ಚಕ್ರವರ್ತಿ, ಸಿ ಮತ್ತು ಡಿ ಭೂಮಿ ಸಮಸ್ಯೆ ಹಾಗೂ ಸೆಕ್ಷನ್ 4 ವಿಚಾರಕ್ಕೆ ಸಂಬAಧಿಸಿದAತೆ ಆ.12ರಂದು ಸೋಮವಾರಪೇಟೆ ಬಂದ್ ಆಚರಿಸಲ