ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕ್ಯಾತನಹಟ್ಟಿ ಗ್ರಾಮದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ತಗ್ಗು ಗುಂಡಿಗಳಿಂದ ತುಂಬಿಕೊಂಡಿವೆ. ಗ್ರಾಮದ ಜನರು ಓಡಾಡಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿವೆ. ಶುಕ್ರವಾರ ಮಧ್ಯಾನ ಗ್ರಾಮದಲ್ಲಿನ ರಸ್ತೆಯ ಕುರಿತು ಬೇಸರ ವ್ಯಕ್ತಪಡಿಸಿ, ಎರಡು ಕಿಲೋಮೀಟರ್ ಅಂತರದಲ್ಲಿಯೇ ಗ್ರಾಮ ಪಂಚಾಯಿತಿ ಇದೆ ಉದ್ಬಾಳ ಗ್ರಾಮ ಪಂಚಾಯಿತಿ ಇದ್ದರೂ ಕೂಡ ನಮಗೆ ಇಲ್ಲದಂತಾಗಿದೆ, ಕೆಸರು ತುಂಬಿಕೊಂಡಿರುವ ರಸ್ತೆಗಳಲ್ಲಿಯೇ ಮಕ್ಕಳು ಶಾಲೆಗೆ ಹೋಗಬೇಕಾಗಿದೆ ಬೈಕ್ ಸವಾರರು ವಯೋ ವೃದ್ಧರು ಇಂತಹ ರಸ್ತೆಯಲ್ಲಿಯೇ ಓಡಾಡುವ ಸ್ಥಿತಿ ಎದುರಾಗಿದೆ ಎಂದು ಗ್ರಾಮದ ಜನ ಬೇಸರ ವ್ಯಕ್ತಪಡಿಸಿದ್ದಾರೆ.