ತಾಲೂಕಿನ ಸಂಪಂಗಿಪುರ ಗ್ರಾಮದಲ್ಲಿ ಸ್ವಂತ ಅಜ್ಜಿಯ ಮೇಲೆ ಮೊಮ್ಮಗ ಮುಚ್ಚಿನಿಂದ ದಾಳಿ ನಡೆಸಿರುವ ಘಟಬೆ ಭಾನುವಾರ ನಡೆದಿದೆ. ತಾಲೂಕಿನ ಸಂಪಂಗಿಪುರ ಗ್ರಾಮದಲ್ಲಿ ಸ್ವಂತ ಅಜ್ಜಿಯ ಮೇಲೆ ಮೊಮ್ಮಗ ಮಚ್ಚಿನಿಂದ ದಾಳಿ ನಡೆಸಿರುವ ಅಮಾನವೀಯ ಘಟನೆ ನಡೆದುದ್ದು,ಸಂಪಂಗಿಪುರದ ಗ್ರಾಮದ ಪಾರ್ವತಮ್ಮ ಶೆಡ್ಡಿನಲ್ಲಿ ಹಸುಗಳಿಗೆ ಮೇವನ್ನು ತಂದು ಶೆಡ್ಡಿನ ಬಳಿ ಹಾಕಿದ್ದರು. ಆ ಸಂದರ್ಭದಲ್ಲಿ ಬಂದ ಸುದರ್ಶನ್ ನನಗೆ ಅಡ್ಡಲಾಗಿ ಹಾಕಿದ್ದೀಯಾ ಎಂದು ಮಾತಿಗೆ ಮಾತು ಬೆಳೆಸಿ ಮನೆಗೆ ಹೋಗಿ ಮಚ್ಚನ್ನು ತಂದು ಅಜ್ಜಿಯ ಮೇಲೆ ಏಕಾಏಕಿಯಾಗಿ ದಾಳಿ ನಡೆಸಿದ್ದಾನೆ.ತೀವ್ರ ಗಾಯಗೊಂಡ ಅಜ್ಜಿ ಪಾರ್ವತಮ್ಮನನ್ನು ಸ್ಥಳೀಯರ ಸಹಾಯದಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ