ಭದ್ರಾವತಿ ತಾಲ್ಲೂಕಿನ ನಗರ, ಗ್ರಾಮೀಣ ಪ್ರದೇಶದಲ್ಲಿ ಮುಸ್ಲಿಮರಿಂದ ರಂಜಾನ್ ಹಬ್ಬವನ್ನು ಪ್ರಾರ್ಥನೆ ಸಲ್ಲಿಸುವ ಮೂಲಕ ಶಾಂತ ರೀತಿಯಲ್ಲಿ ಆಚರಿಸಲಾಯಿತು. ಶಾಸಕ ಬಿ.ಕೆ.ಸಂಗಮೇಶ್ ಸೇರಿದಂತೆ ಉದ್ಯಮಿಗಳಾದ ಬಿಕೆ ಜಗನ್ನಾಥ್, ವಿವಿಧ ಸಮಾಜದ ಮುಖಂಡರು, ಗಣ್ಯರು ರಂಜಾನ್ ಹಬ್ಬದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮುಸ್ಲಿಂ ಸಮಾಜದಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.