ಭೀಮಾನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ರೈತ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬರಗುಡಿ ಗ್ರಾಮದ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ರೈತ ದಸಗೀರ ಮುಲ್ಲಾ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ಮಂಗಳವಾರ ಸಾಯಂಕಾಲ 5ಗಂಟೆ ಸುಮಾರಿಗೆ ವಿತರಿಸಿದರು. ಪ್ರವಾಹದಲ್ಲಿ ತನ್ನ ಜಮೀನು ಮುಳುಗಿದರು ಸಹ ರೈತ ಸಂತ್ರಸ್ತರಿಗೆ ಆಹಾರಕ್ಕೆ ವಿತರಿಸಿ ಮಾನವೀಯತೆ ಮೆರೆದನು. ಈ ಸಂದರ್ಭದಲ್ಲಿ ಮಾತನಾಡಿ ರೈತನ ಕಷ್ಟ ರೈತನಿಗೆ ಮಾತ್ರ ಗೊತ್ತು ಸರ್ಕಾರ ರೈತರಿಗೆ ಪರಿಹಾರ ನೀಡುವಂತಹ ಕೆಲಸ ಮಾಡಬೇಕು ಎಂದು ಮನವಿ ಮಾಡಿದನು.