ಅಪ್ರಾಪ್ತ ಬಾಲಕಿಯನ್ನು ಲಾಡ್ಜ್ ಗೆ ಕರೆದು ಇದು ಅತ್ಯಾಚಾರ ನಡೆಸಿ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳಿಗೆ ಚಿಕ್ಕಮಗಳೂರಿನ ಪೋಕ್ಸೋ ನ್ಯಾಯಾಲಯ ತಲ 10 ವರ್ಷ ಜೈಲು ಶಿಕ್ಷೆ ಹಾಗೂ ಮೊದಲನೇ ಆರೋಪಿಗೆ 41,000 ದಂಡ ಎರಡನೇ ಆರೋಪಿಗೆ 11,000 ದಂಡ ವಿಧಿಸಿ ತೀರ್ಪು ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಂಗಳ ಗ್ರಾಮದ ಕಿರಣ್ ನಾಯ್ಕ ಹಾಗೂ ಅಭಿಷೇಕ್ ನಾಯ್ಕ ಶಿಕ್ಷೆಗೆ ಒಳಗಾಗಿದ್ದು ಕಿರಣ್ನ ನಾಯಕ ಎರಡನೇ ಆರೋಪಿಯಾದ ಅಭಿಷೇಕ್ ನಾಯಕ ಸಹಾಯದಿಂದ ಅಪ್ರಾಪ್ತಿಯನ್ನು ಕಡೂರು ಲಾಡ್ಜ್ ಗೆ ಕರೆದು ಅತ್ಯಾಚಾರ ನಡೆಸಿದರು.