ಹನೂರು ತಾಲೂಕಿನಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ವಿದ್ಯುತ್ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಗಳು ಸಂಭವಿಸಿದೆ. ಮೃತರಲ್ಲಿ ಒಬ್ಬರು ಹನೂರು ಚೆಸ್ಕಾಂ ನೌಕರರಾಗಿದ್ದರೆ, ಮತ್ತೊಬ್ಬರು ಹನೂರು ಪಟ್ಟಣದ ವಿವೇಕಾನಂದ ಶಾಲೆಯ ಉಪನ್ಯಾಸಕರಾಗಿದ್ದಾರೆ. ಹನೂರು ತಾಲೂಕಿನ ನಲ್ಲೂರು–ಕೂಡ್ಲೂರು ಮಾರ್ಗದಲ್ಲಿ ತ್ರೈಮಾಸಿಕ ವಿದ್ಯುತ್ ನಿರ್ವಹಣಾ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಹನೂರಿನ ರಾಹುಲ್ (32) ಅವರಿಗೆ ಅನಾಹುತವಾಗಿ ವಿದ್ಯುತ್ ಸ್ಪರ್ಶ, ಸಂಭವಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಉಪನ್ಯಾಸಕ ಮಂಜುನಾಥ್ ರವರು ಯರಿಯೂರಿನಲ್ಲಿ ವಿದ್ಯುತ್ ಕೇಬಲ್ ಕೆಲಸ ಮಾಡುವಾಗ ಮೃತಪಟ್ಟಿದ್ದಾರೆ