ಗಣಪತಿ ಪ್ರತಿಷ್ಠಾಪನೆಗೆ ಕಡ್ಡಾಯ ಅನುಮತಿ ಪಡೆಯಬೇಕು: ರಂಗಶಾಮಯ್ಯ ಗಣಪತಿ ಮೂರ್ತಿ ಪ್ರತಿಷ್ಠಾಪನೆಯನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕ ತೊಂದರೆಯಾಗದಂತೆ ರೀತಿಯಲ್ಲಿ ಅನುಮತಿ ಪಡೆದು ಗಣಪತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಬೇತಮಂಗಲ ವೃತ್ತ ನೀರಿಕ್ಷಕ ರಂಗಶಾಮಯ್ಯ ತಿಳಿಸಿದರು. ಗ್ರಾಮದ ಪೊಲೀಸ್ ಕ್ವಾಟ್ರಸ್ ಬಳಿಯ ವೃತ್ತ ನಿರೀಕ್ಷಕರ ಕಛೇರಿ ಆವರಣದಲ್ಲಿ ಶುಕ್ರವಾರ ಸಂಜೆ 5 ಗಂಟೆಯಲ್ಲಿ ಸಾರ್ವಜನಿಕ ಧರ್ಮದವರನ್ನು ಹಾಗೂ ಗಣೇಶ ಪ್ರತಿಷ್ಠಾಪನೆಯ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಮಾತನಾಡಿದರು.