ತಾಲೂಕಿನಾದ್ಯಂತ ಹೈಬ್ರಿಡ್ ಜೋಳ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಸೆಪ್ಟೆಂಬರ್ 7ರ ರವಿವಾರ ಮಧ್ಯಾಹ್ನ 3:00 ಸುಮಾರಿಗೆ ರೈತರೊಬ್ಬರು ಟ್ರ್ಯಾಕ್ಟರ್ ನಿಂದ ಹೈಬ್ರಿಡ್ ಜೋಳ ಬಿತ್ತನೆ ಕಾರ್ಯ ನಡೆಸಿದರು. ಮುಂಗಾರಿನಲ್ಲಿ ಈಗಾಗಲೇ ಸೂರ್ಯಕಾಂತಿ ಬೆಳೆ ಪಡೆದುಕೊಂಡ ರೈತರು ಇದೀಗ ಸಡಗರ ಸಂಭ್ರಮದಿಂದ ಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿ ಹೈಬ್ರಿಡ್ ಜೋಳದ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದು, ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.