ತಿಪಟೂರು ನಗರದ ಎಪಿಎಂಸಿಯಲ್ಲಿ ಕೊಬ್ಬರಿ ಖರೀದಿಸುವ ವರ್ತಕರು ಸೂಕ್ತ ಬೆಲೆ ನಿಗದಿಗೊಳಿಸುತ್ತಿಲ್ಲ ರೈತರನ್ನ ಶೋಷಣೆ ಮಾಡುತ್ತಿದ್ದಾರೆ ಎಂದು ಕೃಷಿ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ದೇವರಾಜ್ ಆರೋಪ ಮಾಡಿದರು. ಅವರು ತುಮಕೂರು ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಸೋಮವಾರ ಮಧ್ಯಾಹ್ನ 2 ರ ಸಮಯದಲ್ಲಿ ಮಾತನಾಡಿದರು.ಎಪಿಎಂಸಿ ವರ್ತಕರು ಒಂದೊಂದು ಮಳಿಗೆಯಲ್ಲಿ ವಿಭಿನ್ನ ಬೆಲೆಯನ್ನು ನಿಗದಿ ಮಾಡ್ತಿದ್ದಾರೆ ಎಪಿಎಂಸಿ ನಿರ್ದೇಶಕರಾದ ಹನುಮಂತಪ್ಪನವರಿಗೆ ನಾವು ಕೇಳಿದರೆ ನಿಮಗೆ ಹೆಚ್ಚಿನ ಬೆಲೆ ಬೇಕು ಅಂದ್ರೆ ಬೇರೆ ಮಂಡಿಗೆ ಹೋಗಿ ಅಂತಿದ್ದಾರೆ ಇದರಿಂದ ಓರ್ವ ರೈತನಿಗೆ ಕ್ವಿಂಟಾಲ್ ಗೆ 4000 ನಷ್ಟವಾಗುತ್ತಿದೆ ಎಂದು ಆರೋಪಿಸಿದರು.