ನಗರದ ಆಸ್ತಿದಾರರಿಗೆ ನೀಡಿರುವ 4.5 ಸಾವಿರ ಇ - ಖಾತೆಗಳ ವಿತರಣೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಏನೇ ದೂರುಗಳಿದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡರು ಕರೆ ನೀಡಿದರು. ಸೋಮವಾರ ಮಧ್ಯಾಹ್ನ ನಗರಸಭೆ ಕಚೇರಿಯಲ್ಲಿ ಆಯೋಜಿಸಿದ್ದ ಖಾತಾ ಅಧಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಪ್ರತಿ ವಾರ 280 ಕ್ಕೂ ಹೆಚ್ಚು ಖಾತೆಗಳನ್ನು ಖುದ್ದು ಕಚೇರಿಗೆ ಬಂದು ವಿತರಿಸುತ್ತಿದ್ದೇನೆ. ಈಗಾಗಲೇ ಸುಮಾರು 4.5 ಸಾವಿರ ಫಲಾನುಭವಿಗಳಿಗೆ ಖಾತೆ ವಿತರಣೆ ಮಾಡಲಾಗಿದೆ ಖಾತೆ ವಿಭಾಗದಲ್ಲಿ ಲೋಪದೋಷಗಳನ್ನು ನಿಯಂತ್ರಿಸಲು ತಾವು ನಿರ್ಧಾಕ್ಷಣ್ಯ ಕ್ರಮಕ್ಕೆ ಈ ಹಿಂದೆಯೇ ಮುಂದಾದ ಪರಿಣಾಮವೇ ಇಂದು ಪಾರದರ್ಶಕ ವ್ಯವಸ್ಥೆಗೆ ಅನುಕೂಲವಾಯ್ತೆಂದರು.