ತುರ್ತು ಸಭೆ ಎಂದು ಹೇಳಿ ಕೋಮುಲ್ ನಲ್ಲಿ ನಡೆದಿರುವ ಜಮಾ ಖರ್ಚುಗಳು, ಲಾಭ ನಷ್ಟ, ವ್ಯವಹಾರ ಮಾಡಿರುವಂತಹ ಹಣಕಾಸಿನ ಸಂಬಂಧ ಬಗ್ಗೆ ಅನುಮೋದನೆ ಪಡೆಯಲು ಬಹಳ ಜಾಣತನದಿಂದ ಎಬಿಸಿಡಿ ಎಂದು ಹಾಕಿ 26 ವಿಷಯಗಳ ಬಗ್ಗೆ ಅಜೆಂಡವನ್ನು ತಯಾರಿ ಮಾಡಿದ್ದಾರೆ. ಇದು ಸಂಪೂರ್ಣವಾಗಿ ನಿಯಮ ಬಾಹಿರವಾಗಿ ಕಾನೂನಿನ ವಿರೋಧವಾಗಿದೆ ಎಂದು ಶಾಸಕ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಕೋಲಾರ ಕೋಮುಲ್ ನಲ್ಲಿ ಇಂದು ಕೋಮುಲ್ ಅಧ್ಯಕ್ಷರಾದ ಕೆ. ವೈ ನಂಜೇಗೌಡರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಎಂದು ಎಂ.ಡಿ ಗೋಪಾಲಗೌಡ ಎರಡು ದಿನಗಳ ಮುಂಚೆ ನೋಟಿಸ್ ಅನ್ನು ಕಳಿಸಿದ್ದರು. ತುರ್ತು ಸಭೆಯಲ್ಲಿ ಕೇವಲ ತುರ್ತು ಸಂದರ್ಭದಲ್ಲಿ ಅನುಗುಣವಾಗುವ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಾಗಿತ್ತು, ಎಂದ್ರು