ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ದೀಪಾವಳಿ ಬಂಪರ್ ಕೊಡುಗೆ ನೀಡಿದೆ. ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವ ಮೂಲಕ ಗಿಫ್ಟ್ ನೀಡಿದೆ. ಈ ಕೊಡುಗೆ ನಿರ್ಮಲಾ ಸೀತಾರಾಮನ್ ಅವರಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಕೊಡುಗೆಯಾಗಿದೆ. ದೇಶದಲ್ಲಿ 11 ವರ್ಷಗಳ ಕಾಲ ಆಡಳಿತ ನಡೆಸಿ ಜನಸಾಮಾನ್ಯರ ಹಿತ ಕಾಪಾಡಿದ ಸರ್ಕಾರ ಬಿಜೆಪಿ ಸರ್ಕಾರವಾಗಿದೆ ಎಂದು ವಿಜಯಪುರದಲ್ಲಿ ಗುರುವಾರ ಸಾಯಂಕಾಲ 4ಗಂಟೆ ಸುಮಾರಿಗೆ ಸಂಸದ ರಮೇಶ್ ಜಿಗಜಿಣಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದರು.