ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಮಾವಾ ಮುಕ್ತ ಜಮಖಂಡಿಗಾಗಿ ಬೃಹತ್ ಜನಾಂದೋಲನ ಮೆರವಣಿಗೆ ಜರುಗಿತು.ವಿವಿಧ ಸಂಘಟನೆಗಳ ನೇತೃತ್ವದಲ್ಲಿ . ಸ್ಥಳೀಯ ಓಲೇ ಮಠದ ಶ್ರೀ ಆನಂದ ದೇವರು ಅವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಜರುಗಿತು. ನಗರದ ಹಳೆ ತಹಶೀಲ್ದಾರ ಕಾರ್ಯಾಲಯದಿಂದ ದೇಸಾಯಿ ವೃತ್ತದ ವರೆಗೆ ನಡೆದ ಮೆರವಣಿಗೆಯಲ್ಲಿ ನಗರದ ಪ್ರಮುಖರು ,ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ನಂತರ ನಗರದ ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ,ರಸ್ತೆ ತಡೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.