ನಂಜೇಗೌಡರೆ, ನೀವು ಪ್ರಾಮಾಣಿಕರಾದರೆ ಏಳು ವರ್ಷಗಳಲ್ಲಿ ಕೋಮುಲ್ ನಲ್ಲಿ ಖರ್ಚು ಮಾಡಿರುವ ಬಗ್ಗೆ ಶ್ವೇತಾ ಪತ್ರವನ್ನು ಹೊರಡಿಸಿ ಶ್ವೇತ ಪತ್ರದಲ್ಲಿ ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡಿದ್ದೀರಿ ಲೆಕ್ಕವನ್ನು ತೋರಿಸಿ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಸವಾಲು ಹಾಕಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,7ವರ್ಷಗಳಲ್ಲಿ ಯಾವ ಯಾವ ಭಾಗಕ್ಕೆ ಮಾರ್ಕೆಟ್ ದರಕ್ಕಿಂತ ಎಷ್ಟೆಷ್ಟು ಹೆಚ್ಚಾಗಿ ಖರ್ಚು ಮಾಡಿದ್ದೀರಿ ಹಾಗೂ ಒಕ್ಕೂಟದಲ್ಲಿ ಯಾವ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ಲ್ಯಾಪ್ಸ್ ಆಗಿದೆ. ಹಾಗೂ ಖರೀದಿಯಲ್ಲಿ ಲ್ಯಾಪ್ಸ್ ಆಗಿದೆ. ಮಾರಾಟ ಮಾಡುವಾಗ ಅವಧಿ ಮೀರಿದೆ ಎಂದು ಎಷ್ಟು ವಸ್ತುಗಳ ಲೆಕ್ಕ ತಪ್ಪು ಮಾಹಿತಿ ನೀಡಿದ್ದೀರಿ ಎಂದ್ರು