ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹನೂರು ಪಟ್ಟಣದಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ ನೇತೃತ್ವದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಹನೂರು ಪಟ್ಟಣ ಠಾಣೆಯಿಂದ ಶನಿವಾರ ಆರಂಭಗೊಂಡ ರೂಟ್ ಮಾರ್ಚ್ ಲೊಕ್ಕನಹಳ್ಳಿ ರಸ್ತೆ ಬಳಿಕ ಸಾಗಿ ಮಠದ ಬೀದಿ, ಬಂಡಳ್ಳಿ ರಸ್ತೆ, ಮಲೆ ಮಹದೇಶ್ವರ ಬೆಟ್ಟ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.