ವಿದ್ಯಾರ್ಥಿಗಳು ಉತ್ತಮ ಸಾಧನೆಗೆ ಛಲ, ಪರಿಶ್ರಮ ರೂಢಿಸಿಕೊಳ್ಳಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಸಲಹೆ ನೀಡಿದರು. ಸೋಮವಾರ ಸಂಜೆ 4 ಗಂಟೆಗೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಅಕ್ಷರ ಮಾಲಾ’ ಕಾರ್ಯಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಕ್ಷಣ ಉಚಿತವಾದರೆ ನಿರ್ಲಕ್ಷ÷್ಯ ಮನೋಭಾವ ಬೆಳೆಯುತ್ತದೆ. ಗುರು ಕಾಣಿಕೆ, ಪುಸ್ತಕಗಳನ್ನು ಖರೀದಿಸಿ ಅಭ್ಯಾಸ ಮಾಡಿದಾಗ ಗುಣಾತ್ಮಕ ಶಿಕ್ಷಣದ ಜೊತೆ ಮಹತ್ವದ ಮೌಲ್ಯ ಸಿಗುತ್ತದೆ .ಇನ್ ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ ಬಿ ವಿನಯ್ ಕುಮಾರ್ ಅವರು ಬಡಕುಟುಂಬದಲ್ಲಿ ಜನಿಸಿ ನಿರ್ಧಿಷ್ಟ ಗುರಿಸಾಧಿಸಲು ನಿರಂತರ ಶ್ರಮದಿಂದ ಸಮಾಜದಲ್ಲಿ ಮುನ್ನಲೆಗೆ ಬಂದಿದ್ದಾರೆ ಎಂದರು.