ತುಮಕೂರಿನ ಬಿಎಚ್ ರಸ್ತೆಯ ಶಂಕರ ಮಠದ ಬಳಿ ವಿಶ್ವ ಹಿಂದೂ ಪರಿಷದ್ ಭಜರಂಗದಳ ವತಿಯಿಂದ ಹಿಂದೂ ಮಹಾ ಗಣಪತಿ 8 ನೇ ವರ್ಷದ ಪ್ರತಿಷ್ಠಾಪನೆ ಮಹೋತ್ಸವ ಆ. 27 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಅಧ್ಯಕ್ಷ ಬಿ. ಜಿ. ಪ್ರದೀಪ್ ಮಾಹಿತಿ ನೀಡಿದರು. ಅವರು ತುಮಕೂರು ನಗರದ ಕೃಷ್ಣ ಮಠದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶನಿವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಮಾತನಾಡಿ, ನಾಗರಕಟ್ಟೆ ದೇವಾಲಯದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡುವವರಿಗೂ ವಿಶ್ವ ಹಿಂದೂ ಪರಿಷದ್ ಭಜರಂಗದಳಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದರು.