ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಗೆದಗೇರಿ ಗ್ರಾಮದಲ್ಲಿ ಹಿರಿಯಮ್ಮ ದೇವಿಯ ಭಜನಾ ಸಂಘದವರು ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡ ಭಜನೆಯ ಮುಕ್ತಾಯ ಸಮಾರಂಭ ನಡೆಯಿತು. ಸೆಪ್ಟೆಂಬರ್ 3 ರಂದು ಸಂಜೆ 6-30 ಗಂಟೆಗೆ ಗೆದಗೇರಿ ಗ್ರಾಮದ ಹಿರಿಯರಾದ ರುದ್ರಪ್ಪ ನಡಲುಮನಿಯವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಭಜನೆ ಮಹಾಮಂಗಳ ಕಾರ್ಯಕ್ರಮದಲ್ಲಿ ಪೂರ್ತಗೇರಿ.ಕುದುರೆ ಕೊಟ್ಟಿಗೆ. ಹೊಸಳ್ಳಿ. ರೋಣ. ತೊಂಡಿಹಾಳ. ಯಡಿಯಾಪುರ ಮದ್ಲೂರು ಗ್ರಾಮಗಳ ಭಜನಾ ಮಂಡಳಿಗಳ ಕಲಾವಿದರು ಭಾಗವಹಿಸಿದ್ದರು. ಗೆದಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಭಾವಚಿತ್ರ ಮೇರವಣಿಗೆಯ ಜೋತೆಗೆ ಭಜನೆ ಕಾರ್ಯಕ್ರಮದ ಮೆರವಣಿಗೆ ಯಶಸ್ವಿ ಯಾಗಿ ನಡೆಯಿತು