ಖಾಸಗಿ ಬ್ಯಾಂಕ್ ಸಿಬ್ಬಂದಿಯ ಕಿರುಕುಳಕ್ಕೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ಜರುಗಿದೆ.ಕುಟುಂಬಸ್ಥರು ಖಾಸಗಿ ಬ್ಯಾಂಕ್ ಸಿಬ್ನಂದಿ ವಿರುದ್ದ ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನ ದಾದಾ ಹಯಾತ್ ಕೊರ್ತಿ (40) ಎಂದು ಗುರ್ತಿಸಲಾಗಿದೆ. ಬಾಗಲಕೋಟೆಯ ನವನಗರದ ಎರಡನೇ ಸೆಕ್ಟರ್ ಮನೆಯಲ್ಲಿ ಘಟನೆ ಜರುಗಿದೆ.ಬಾಯಿ ಕ್ಯಾನ್ಸರನಿಂದ ಬಳಲುತ್ತಿದ್ದ ವ್ಯಕ್ತಿ ಚಿಕಿತ್ಸೆಗಾಗಿ ಇಂಡಸ್ ಲ್ಯಾಂಡ್ ಮಹಿಳಾ ಸಂಘದಿಂದ ಮೂರು ಲಕ್ಷ ಸಾಲಪಡೆದಿದ್ದರು ಎಂದು ತಿಳಿದು ಬಂದಿದೆ.