ಚಿತ್ರದುರ್ಗ ಜಿಲ್ಲೆಯಲ್ಲಿ ರಸಗೊಬ್ಬರ ಅಭಾವ ಮುಂದುವರೆದಿದೆ. ಬುಧವಾರ ಬೆಳಿಗ್ಗೆ 7 ಗಂಟೆಗೆ ಯೂರಿಯಾ ಗೊಬ್ಬರಕ್ಕೆ ರೈತರು ಮುಗಿ ಬಿದ್ದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಾಗೂರು ಗ್ರಾಮದಲ್ಲಿ ಯೂರಿಯಾ ಗೊಬ್ಬರಕ್ಕೆ ಅನ್ನದಾತರು ಸಾಲುಗಟ್ಟಿ ನಿಂತಿದ್ದಾರೆ. ಅಲ್ಲದೆ ಬೆಳಿಗ್ಗೆ ಸರತಿ ಸಾಲಿನಲ್ಲಿ ಗೊಬ್ಬರಕ್ಕೆ ನಿಂತಿದ್ದು, ಯೂರಿಯಾ ಖರೀದಿಗೆ ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ. ಅಲ್ಲದೆ ಮಹಿಳೆಯರು, ಮಕ್ಕಳು ಎನ್ನದೇ ಗೊಬ್ಬರಕ್ಕೆ ಕ್ಯೂ ನಿಂತಿದ್ದು, ಯೂರಿಯಾ ಪಡೆಯಲು ರೈತರು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿದೆ.