ಚಾಮರಾಜನಗರ, ತಾಲೂಕಿನ ಕಾಳನಹುಂಡಿ ಗ್ರಾಮದಲ್ಲಿ ಹಾಲಿನ ಗುಣಮಟ್ಟ ಸಂಬಂಧಿಸಿದಾಗಿ ಉಂಟಾದ ಗದ್ದಲದ ವೇಳೆ ವ್ಯಕ್ತಿಯೋರ್ವ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಗ್ರಾಮದ ಹಾಲಿನ ಡೈರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಾಗಪ್ಪ ಮತ್ತಗ್ರಾಮದ ಮಹದೇವಸ್ವಾಮಿ ನಡುವೆ ಮಾತಿನ ಚಕಮಕಿ ಉಂಟಾದ ಹಿನ್ನೆಲೆ, ಹಾಲಿನ ಕ್ಯಾನ್‌ನಿಂದ ನಾಗಪ್ಪರ ತಲೆಗೆ ಹೊಡೆದ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸುತ್ತದೆ. ಈ ಹೊಡೆತದಿಂದ ನಾಗಪ್ಪ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ಹರವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಗಾಯ ಸಣ್ಣ ಮಟ್ಟದಲ್ಲಿದ್ದು, ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.