ಕಲಬುರಗಿ ಜಿಲ್ಲೆಯಲ್ಲಿ ಕಳೆದ 2024-25 ನೇ ಸಾಲಿನಲ್ಲಿ ಆಗಿರುವ ಅತಿವೃಷ್ಟಿಯಿಂದ ಬೆಳೆ ಹಾನಿಯ ಬಾಕಿ ಪರಿಹಾರ ಮೊತ್ತ ಶೀಘ್ರವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ನವ ಕರ್ನಾಟಕ ರೈತ ಸಂಘದಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನೆ ಮಾಡಲಾಯಿತು.. ಅತಿವೃಷ್ಟಿಯಿಂದ 2024 ರ ಜುಲೈ ಅಗಸ್ಟ್ ತಿಂಗಳಿನಲ್ಲಿ ರೈತರು ಬೆಳೆದು ಹೆಸರು, ಉದ್ದು, ತೊಗರಿ ಸೇರಿ ಬಿತ್ತಿದ ಬಹುತೇಕ ಬೆಳೆ ನಷ್ಟವಾಗಿದೆ. ಮಾರ್ಚ್ ನಲ್ಲಿ ಪ್ರತಿಭಟನೆ ನಡೆಸಿದಾಗ ಸರ್ಕಾರ 667 ಕೋಟಿ ಪರಿಹಾರ ಬಿಡುಗಡೆ ಮಾಡಿದ್ದಾಗಿ ಘೊಷಣೆ ಮಾಡಿತ್ತು. ಆದ್ರೆ ಅರ್ಧದಷ್ಟು ಹಣ ಬಂದು ಇನ್ನೂಳಿದ ಪರಿಹಾರಸ ಹಣ ಬರದೆ ರೈತರು ಕಂಗಾಲಾಗಿದ್ದಾರೆ. ತಕ್ಷಣ ಬಾಕಿ ಮೊತ್ತ ಬಿಡುಗಡೆ ಮಾಡಬೇಕು. ಅದರಂತೆ ಈ ಬಾರಿಯೂ ಅತಿವೃಷ್ಟಿಯಿಂದ ಹಾನಿಯಾದ ಬೆಳಗೆ ಪರಿಹಾ