ಹನೂರು: ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಮೇಕೆ ಕದ್ದಿದ್ದ ಆರೋಪಿಯನ್ನು ಸ್ಥಳೀಯ ರೈತರೇ ಪತ್ತೆ ಹಚ್ಚಿ ರಾಮಾಪುರ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಸೋಮವಾರ ಸಂಜೆ5ರಲ್ಲಿ ನಡೆದಿದೆ. ಭಾನುವಾರ ಮುಂಜಾನೆ, ದೊಮ್ಮನಗದ್ದೆ ಗ್ರಾಮದ ಜಮೀನೊಂದರಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಗಳನ್ನು ಆರೋಪಿ ಕದ್ದುಕೊಂಡು ಪರಾರಿಯಾಗಿದ್ದನು. ಇದರ ಪರಿಣಾಮದಿಂದ ದುಃಖಿತರಾದ ಮಾಲೀಕರು ಹಾಗೂ ಗ್ರಾಮಸ್ಥರು ಮೇಕೆಯ ಪತ್ತೆಗೆ ನರಸೀಪುರದ ಸಂತೆಗೆ ತೆರಳಿದ್ದರು. ಸಂತೆಯಲ್ಲಿ ತಾವು ಕಳೆದುಕೊಂಡ ಮೇಕೆಯನ್ನೇ ಗುರುತಿಸಿದ ರೈತರು, ಮೇಕೆಯೊಂದಿಗೆ ಇದ್ದ ಕಳ್ಳನನ್ನೂ ಪತ್ತೆಹಚ್ಚಿ, ಸ್ಥಳದಲ್ಲಿಯೇ ಹಿಡಿದು ರಾಮಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.