ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ತಾಲೂಕ ನ್ಯಾಯಾಲಯ ಸ್ಥಾಪಿಸಲು ಜಿಲ್ಲಾ ನ್ಯಾಯಾಧೀಶರಾದ ಮರಳಸಿದ್ದರಾಧ್ಯ ಎಚ್.ಜೆ ಅವರು ಗುರುಮಠಕಲ್ ಪಟ್ಟಣದಲ್ಲಿರುವ ಟೌನ್ ಹಾಲ್ ಕಟ್ಟಡವನ್ನು ಪರಿಶೀಲಿಸಿದ್ದಾರೆ. ಸೋಮವಾರ ಮಧ್ಯಾಹ್ನ ಟೌನ್ ಹಾಲ್ ಕಟ್ಟಡಕ್ಕೆ ಭೇಟಿ ನೀಡಿದಾಗ ಗುರುಮಠಕಲ್ ಪುರಸಭೆಯ ಮುಖ್ಯ ಅಧಿಕಾರಿಗಳಾದ ಭಾರತಿ ಅವರು ಟೌನ್ ಹಾಲ್ ಕಟ್ಟಡದ ಮಾಹಿತಿ ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.