ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಮಂಗಳವಾರ ಕರ್ನಾಟಕ ಅರಣ್ಯ ಇಲಾಖೆ,ಶಿವಮೊಗ್ಗ ವನ್ಯಜೀವಿ ವಿಭಾಗ, ಶಿವಮೊಗ್ಗ ವನ್ಯಜೀವಿ ಉಪ ವಿಭಾಗ, ಸಕ್ರೆಬೈಲು ವನ್ಯಜೀವಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆನೆ ದಿನಾಚರಣೆ ಪ್ರಯುಕ್ತವಾಗಿ ಬಿಡಾರದ ಎರಡು ಆನೆ ಮರಿಗಳಿಗೆ ನಾಮಕರಣ ಮಾಡಲಾಯಿತು. ಸಕ್ರೆಬೈಲು ಆನೆ ಬಿಡಾರದ ನೇತ್ರಾವತಿ ಹಾಗೂ ಭಾನುಮತಿ ಆನೆಗಳಿಗೆ ಹೆಣ್ಣು ಆನೆ ಮರಿಗಳಿಗೆ ಶಾಸ್ತ್ರೋತ್ತವಾಗಿ ಚಾಮುಂಡಿ ಹಾಗೂ ತುಂಗಾ ಎಂದು ಹೆಸರಿಡುವ ಮೂಲಕ ಸಂಭ್ರಮಾಡಕರದಿಂದ ನಾಮಕರಣವನ್ನ ಮಾಡಲಾಯಿತು.