ಹಳಿಯಾಳ : ಕೃಷಿ ಇಲಾಖೆ ಹಳಿಯಾಳ, 2025 - 26 ನೇ ಸಾಲಿನ ಆತ್ಮ ಯೋಜನೆಯಡಿ ಕಬ್ಬು ಬೆಳೆಯ ಕುರಿತಾಗಿ ರೈತರು ಮತ್ತು ವಿಜ್ಞಾನಿಗಳ ನಡುವೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವು ಇಂದು ಸೋಮವಾರ ಸಂಜೆ 5:00 ಗಂಟೆ ಸುಮಾರಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಹಾಯಕ ಕೃಷಿ ನಿರ್ದೇಶಕರಾದ ಪಿ.ಐ ಮಾನೆ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳಿಯಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಎಂ.ವಿ. ಗಾಡಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಐಸಿಆರ್‌ಪಿ ಶುಗರ್ ಕೇನ್ ಸಂಕೇಶ್ವರ ಇಲ್ಲಿಯ ಹಿರಿಯ ವಿಜ್ಞಾನಿ ಡಾ. ಸುನೀಲಕುಮಾರ್ ನೂಲ್ವಿ ಅವರು ಕಬ್ಬಿನ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ