ಚಾಮರಾಜನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಮಾತನಾಡಿ ಚಾಮರಾಜನಗರ ತಾಲೂಕಿನ ಯಾಲಕ್ಕೂರು ಗ್ರಾಮದಲ್ಲಿ ನಕಲಿ ಪಂಡಿತನೋರ್ವ ಶಾಸ್ತ್ರ ಹೇಳುವ ನೆಪದಲ್ಲಿ ಮನೆಗೆ ಬಂದು ಸಾಂಬ್ರಾಣು ಹೊಗೆಯನ್ನು ಹಾಕಿ ಪ್ರಜ್ಞೆ ತಪ್ಪಿಸಿ ಮಹಿಳೆಯ ಚಿನ್ನದ ಸರವನ್ನು ಕದ್ದು ಪಾರಾರಿಯಾಗಿದ್ದ ಇತನನ್ನು ಹಿಡಿದು ಜೈಲಿಗೆ ಕಳುಹಿಸಲಾಗಿದೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಕನಕ ಭವನ ಬಳಿ ಆರೋಪಿ ಮುತ್ತಣ್ಣ ಅಲಿಯಾಸ್ ಚಂದ್ರು ಪಂಡಿತ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಪ್ರತಿಕ್ರಿಯೆ ನೀಡಿದರು