ರಾಯಚೂರು ತಾಲೂಕಿನ ಹೊಸ ಮಲಿಯಾಬಾದ್ ಗ್ರಾಮದಲ್ಲಿ ವ್ಯಕ್ತಿ ಒಬ್ಬ ತನ್ನ ಮನೆಯಲ್ಲಿ ನಕಲಿ ಶೇಂದಿ ತಯಾರಿಸಲು ಬೇಕಾಗುವ ಮಾದಕ ವಸ್ತುಗಳನ್ನು ಸಂಗ್ರಹ ಮಾಡಿಟ್ಟು ಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಮಂಜುನಾಥ್ ಎನ್ನುವವರ ಮನೆಯಲ್ಲಿ ದಾಳಿ ಮಾಡಿದಾಗ, ಅಲ್ಬಾಜೋಲಂ, ಸಿಟ್ರಿಕ್ ಆಸಿಡ್, ಡ್ರೈ ಈಸ್ಟ್ ಮತ್ತು ವೈಟ್ ಪೇಸ್ಟ್ ಮುಂತಾದ ಮಾದಕ ವಸ್ತುಗಳನ್ನು ಮನೆಯಲ್ಲಿ ಶೇಖರಿಸಿ ಇಟ್ಟಿದ್ದ. ಇದರ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ 1.80 ಕೆಜಿ ಮಾದಕ ವಸ್ತು, 5 ಕೆಜಿ ಸಿಟ್ರಿಕ್ ಆಸಿಡ್, 1.500 ಕೆ.ಜಿ ಡ್ರೈ ಈಸ್ಟ್ ಹಾಗೂ 6 ಕೆಜಿ ವೈಟ್ ಪೇಸ್ಟ್ ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿ ಮಂಜುನಾಥನನ್ನು ವಶಕ್ಕೆ ಪಡೆದಿದ್ದಾರೆ.