ಆ.24 ರಂದು ಗೌರಿಬಿದನೂರು ನಗರದಲ್ಲಿ ಡಾ. ಎಚ್ ನರಸಿಂಹಯ್ಯ ಅಭಿವೃದಿ ಪ್ರಾಧಿಕಾರದ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಎಚ್ ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎಸ್ ಶಿವಶಂಕರರೆಡ್ಡಿಯವರು, ಉದ್ಯೋಗ ಮೇಳೆವನ್ನು ಈ ಭಾಗದ ಯುವಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.