ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಅವರು ತಿಳಿಸಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು,ಮೃತ ಪಟ್ಟಿರುವ ಬಸಯ್ಯ ಮಠಪತಿ ಎನ್ನುವ ವ್ಯಕ್ತಿಯ ಶವ ಆತನ ಮನೆಯಲ್ಲಿ ಪತ್ತೆಯಾಗಿದೆ.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ.ಶವ ದೊರೆಗ ಸ್ಥಳದಲ್ಲಿ ಎಕ್ಸಪರ್ಟ ಸಾಕ್ಷಿಗಳನ್ಮ ಕಲೆ ಹಾಕಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ.ಬಸು ಎನ್ನುವ ಮೃತ ವ್ಯಕ್ತಿಯ ಸ್ನೇಹಿತನ ಕೊಲೆ ಮಾಡಿದ ಶಂಕೆ ಇದೆ.ಆತ ಪರಾರಿಯಾಗಿದ್ದು,ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.