ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ನೀಡಿದ ವಾಹನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಆವರಣದಲ್ಲಿ ಸೋಮವಾರ ಮಧ್ಯಾಹ್ನ 2-30 ಗಂಟೆಗೆ ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ನೂತನ ಪೊಲೀಸ್ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಸ್‌ಗೆ ಚಾಲನೆ ನೀಡಿದ ಬಳಿಕ ಸಂಸದರು ಸ್ವತಃ ತಾವೇ ಬಸ್ ಚಲಾಯಿಸಿ, ಬಸ್ಸಿನ ಸೌಕರ್ಯದ ಕುರಿತು ಪರಿಸೀಲನೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ, ಬಸಾಪೂರ ಗ್ರಾಮದ ಹತ್ತಿರವಿರುವ ಹೊಸ ಜಿಲ್ಲಾ ಪೊಲೀಸ್ ಕ್ವಾಟ್ರಸ್‌ದಿಂದ ಪೊಲೀಸ್ ನೌಕರರ ಮಕ್ಕಳು ಶಾಲೆಗಾಗಿ ಕೊಪ್ಪಳಕ್ಕೆ ಬರಬೇಕಿದ್ದು, ಅಲ್ಲಿ ವಾಹನದ ಸೌಲಭ್ಯದ ಕೊರತೆ ಇರುವ ಕ