ಖಾತೆಗಳಿಗೆ ಸಂಬಂಧಪಟ್ಟಂತೆ ಒಂದು ಪ್ರಕರಣಕ್ಕಿಂತ ಮತ್ತೊಂದು ಪ್ರಕರಣ ಭಿನ್ನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿಎನ್ ರವೀಂದ್ರರವರು ಇಂದು ಶಿಡ್ಲಘಟ್ಟ ನಗರದಲ್ಲಿ ತಿಳಿಸಿದ್ದಾರೆ. ಎ-ಖಾತೆ ಮತ್ತು ಬಿ-ಖಾತೆ ಸೇರಿದಂತೆ ಲೇಔಟ್ ಗಳಿಗೆ,ನಿವೇಶನಗಳಿಗೆ ಮತ್ತಿತರ ಖಾತೆಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು, ಒಂದೊಂದು ಪ್ರಕರಣವು ಮತ್ತೊಂದು ಪ್ರಕರಣಕ್ಕೆ ಭಿನ್ನವಾಗಿದ್ದು, ಅವುಗಳನ್ನು ಪರಿಶೀಲಿಸಿ ಖಾತೆಗಳನ್ನು ಮಾಡಲಾಗುತ್ತದೆ ಎಂದರು.