ದಾಂಡೇಲಿ : ಇತಿಹಾಸ ಪ್ರಸಿದ್ಧ ಹಾಗೂ ದಾಂಡೇಲಿಯ ಸತ್ಪುರುಷ ಶ್ರೀ ದಾಂಡೇಲಪ್ಪನ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ದಾಂಡೇಲಿ ನಗರದ ಹತ್ತಿರದಲ್ಲಿರುವ ತಾಲೂಕಿನ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೇರವಾಡದಲ್ಲಿರುವ ದಾಂಡೇಲಿ ಜನತೆಯ ಆರಾಧ್ಯ ದೇವರಾದ ಶ್ರೀ ದಾಂಡೇಲಪ್ಪ ದೇವರ ದೇವಸ್ಥಾನವು ನಾಳೆ ನಡೆಯಲಿರುವ ಜಾತ್ರೋತ್ಸವಕ್ಕೆ ಸಜ್ಜಾಗಿದೆ. ದಾಂಡೇಲಿ ತಾಲೂಕಾಡಳಿತ, ಆಲೂರು ಗ್ರಾಮ ಪಂಚಾಯತ್ ಮತ್ತು ನಗರಾಡಳಿತ ಹಾಗೂ ಜಾತ್ರೋತ್ಸವ ಸಮಿತಿ ಮತ್ತು ನಿರಾಶೆ ಮನೆತನದವರು ಜಾತ್ರೋತ್ಸವದ ಯಶಸ್ವಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ.