ಹಿರಿಯೂರು:-ನಗರದ ಕೃಷ್ಣಪ್ಪ ಸರ್ಕಲ್ ನಲ್ಲಿ ಶನಿವಾರ ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 1985ನೇ ಮಧ್ಯವರ್ಧನ ಶಿಬಿರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಚಿವ ಡಿ ಸುಧಾಕರ್ ಉದ್ಘಾಟಿಸಿ ಮಾತನಾಡಿದರು, ಸಮಾಜದಲ್ಲಿ ಆರೋಗ್ಯ ಶಾಂತಿ ಮತ್ತು ಪ್ರಗತಿಗೆ ಮಧ್ಯವರ್ಜನೆ ಅತ್ಯಗತ್ಯ.ಇಂತಹ ಶಿಬಿರಗಳು ಜನರಲ್ಲಿ ಜಾಗೃತಿ ಮೂಡಿಸಿ ಆರೋಗ್ಯಕರ ಬದುಕಿಗೆ ದಾರಿ ತೋರಿಸುತ್ತಿವೆ, ಶಿಬಿರದ ಸದುಪಯೋಗವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.