ಮದ್ದೂರು ತಮಿಳು ಕಾಲೋನಿ 110 ಕುಟುಂಬಗಳಿಗೆ ನಿವೇಶನ ಹಂಚಿಕೆಗೆ ಒತ್ತಾಯಿಸಿ ನಗರದ ಡಿಸಿ ಕಚೇರಿ ಬಳಿ ಅಹೋರಾತ್ರಿ ಧರಣಿ ಅರಂಭಿಸಿದರು. ಶನಿವಾರ ಸಂಜೆ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ಹಾಗೂ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಸದಸ್ಯರು ಬೆಂಬಲ ಸೂಚಿಸಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಜನಶಕ್ತಿ ಸಂಘಟನೆ ಮುಖಂಡ ಸಿದ್ದರಾಜು ಅವರು, ಮದ್ದೂರು ತಮಿಳು ಕಾಲೊನಿ ಜನರಿಗೆ ಕಾನೂನು ಬದ್ದವಾಗಿ ಮಂಜೂರು ಮಾಡಿ ಜಿಲ್ಲಾಡಳಿತ ನಮಗೆ ನೀಡಿರುವ ಕುದರಗುಂಡಿ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ 245ರಲ್ಲಿ 3 ಎಕರೆ ಜಾಗದಲ್ಲಿ ದಾಖಲೆ ಇಲ್ಲದ ಅಕ್ರಮ ಭೂ ಕಬಳಿಕೆದಾರರನ್ನು ತರೆವುಗೊಳಿಸಲು ವಿಫಲವಾದ ಕೊಳಗೇರಿ ಅಭಿವೃದ್ಧಿ ಮಂಡಳಿಯ ನಿರ್ಲಕ್ಷ್ಯವನ್ನು ಖಂಡಿಸಿದರು.